ಬನ್ನಂಜೆ ಉವಾಚ : ಪ್ರವಚನ ಮಾಲಿಕೆ

ಡಾ. ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳ “ಆಡಿಯೋ ಗ್ಯಾಲರಿ” .

 

ಡಾ. ಬನ್ನಂಜೆಯವರ ಮಾತುಗಳು ಕೇಳುಗನನ್ನು ಸಂಪೂರ್ಣ ಬೇರೆಯೇ ಪ್ರಪಂಚಕ್ಕೆ ಕರೆದೊಯುತ್ತದೆ.

ಅವರ ಪ್ರವಚನಗಳು ಸಮಾಜದ ಸಾಂಪ್ರದಾಯಿಕ ಮೌಢ್ಯಗಳನ್ನು ಬಯಲಿಗೆಳೆದು, ತತ್ವಶಾಸ್ತ್ರದ ಸತ್ಯನಿಷ್ಠ ತಾತ್ವಿಕ ಚಿಂತನೆಗೆ ಚ್ಯುತಿಬಾರದಂತೆ ವಿಶ್ವದಾದ್ಯಂತ ಜಾತಿ, ಮತ, ಪಂಥಗಳನ್ನು ಮೀರಿ ಕೇಳುಗರ ಮನದಲ್ಲಿ ಜೀವನ ಮೌಲ್ಯಗಳ ಬಗೆಗೆ ವಿಶ್ವಾಸ, ಮಾನವೀಯತೆಯ ಬಗೆಗೆ ಗೌರವ ಮತ್ತು ಅಧ್ಯಾತ್ಮ ಬಂಧುಗಳಲ್ಲಿ ಜ್ಞಾನನಿಧಿಯ ಮನೆ ಮಾಡಿದೆ.

ಭಾಷೆಯಲ್ಲಿ ಹಿರಿತನ, ವಿಷಯದಲ್ಲಿ ನಿಖರತೆ, ಸಂಶೋಧನೆಯ ಆಳ ಇದೆಲದಕ್ಕೂ ಮಿಗಿಲಾಗಿ ಗಿಮಿಕ್ಕುಗಳಿಲ್ಲದ,  ಸತ್ಯ – ನಿರ್ಭಯತೆ – ನಿಷ್ಠೆಗಳ ದಾರಿಯಲ್ಲೇ ಸಾಗಿ ಪಕ್ಷಪಾತವಿಲ್ಲದ ಪ್ರವಚನಧಾರೆ. ಹೀಗೆ ಅವರ ಈ ಕೆಲವು ಗುಣಲಕ್ಷಣಗಳು ದಶಕಗಳಿಂದ ಬಹುಸಂಖ್ಯಾ ಅಧ್ಯಾತ್ಮ ಬಂಧುಗಳ ಸಾತ್ವಿಕವಲಯವನ್ನು ಮನಸೂರೆಗೊಳಿಸಿದೆ.

ಇಲ್ಲಿ ನಾವು ತತ್ವಶಾಸ್ತ್ರದ ವಿವಿಧ ಆಯಾಮಗಳ ಬಗೆಗೆ ಮತ್ತು ಇನ್ನಿತರ ಅನೇಕ ಜನಪ್ರಿಯ ವಿಷಯಗಳ ಕುರಿತು  ಡಾ. ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಮಾಲಿಕೆಯ ಸಂಗ್ರಹಗಳನ್ನು ಪ್ರಸ್ತುತ ಪಡಿಸುತ್ತಿದ್ದೇವೆ.

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು