ಡಾ. | ಬನ್ನಂಜೆ : ಕೃತಿಗಳು 

 

ಕೃತಿಗಳು / ಸಾಧನೆಗಳು  [ಸಂಕ್ಷಿಪ್ತವಾಗಿ ಇಲ್ಲಿದೆ ; ಕೊನೆಯಲ್ಲಿ ವಿವರವಾಗಿ ಕೊಟ್ಟಿದೆ] :

ಪುರಾತನ ಬರಹಗಳ ಅರಸಿ ಹೊರಟ ಇವರು ದೇಶದಾದ್ಯಂತ ಸುತ್ತಾಡಿ, ವಿವಿಧ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಗಳಿಗೆ , ತಾತ್ವಿಕ ಕೇಂದ್ರಗಳಿಗೆ  ಮತ್ತು ಮಠಗಳಿಗೆ ಭೇಟಿಕೊಟ್ಟು ಪುರಾತನ ತಾಳೆಗರಿ ಬರಹಗಳ ಅಧ್ಯಯನ ನಡೆಸುತ್ತಾ ಸುಮಾರು ೨೦೦ ರಕ್ಕೂ ಹೆಚ್ಚು ಅಪರೂಪದ ಹಸ್ತಪ್ರತಿಗಳನ್ನು ದೇಶದ ಮೂಲೆ-ಮೂಲೆಗಳಿಂದ ಹುಡುಕಿ ಹೆಕ್ಕಿತೆಗೆದಿದ್ದಾರೆ.

ಇವರ ಸಾಧನೆಯಲ್ಲಿ ಶಿಖರಪ್ರಾಯವಾಗಿ ನಿಲ್ಲುವಂತದು, ಅವರು ನಡೆಸಿದ ಅಪರೂಪದ ತಾಳೆಗರಿಗಳ ಅಧ್ಯಯನದಲ್ಲಿ ದೊರೆತಂಥ, ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ಹೃಷೀಕೇಶತೀರ್ಥರು ಸ್ವಹಸ್ತದಿಂದ ಬರೆದಿಟ್ಟ, ಸುಮಾರು ೭೫೦ ವರ್ಷಗಳ ಹಿಂದಿನ ಹಳೆಯ ಹಸ್ತಪ್ರತಿಗಳ ಆಳವಾದ ಸಂಶೋಧನಾತ್ಮಕ ಅಧ್ಯಯನ ನಡೆಸಿ ಸಂಪಾದಿಸಿದ ಮತ್ತು ಪ್ರಕಾಶಗೊಳಿಸಿದ “ಸರ್ವಮೂಲ ಗ್ರಂಥಗಳು”…

ಅದರಂತೆ, ಅವರು ಪರಿಶ್ರಮ ಪಟ್ಟು ದುಡಿದ ವಿಭಾಗಗಳೆಂದರೆ, ವೇದಗಳು, ವೇದಾಂತ , ಸಾಹಿತ್ಯ ನ್ಯಾಯ ಮುಂತಾದವು.  ಹೀಗೆ ಅನೇಕ ಅಪರೂಪದ ತಾಡವಾಲೆ ಹಸ್ತ ಪ್ರತಿಗಳನ್ನು ತಮ್ಮ ಅವಿರತ ಅಧ್ಯಯನ ಮತ್ತು ಸಂಶೋಧನೆಗಳ ಮೂಲಕ ಹೊರತಂದು ಪ್ರಕಾಶಗೊಳಿಸಿದ್ದಾರೆ….

 ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಮತ್ತು ಸಂಸ್ಕೃತ ಭಾಷೆಯ ಬಗೆಗಿನ ಮಹತ್ವವನ್ನು ಅಸಂಖ್ಯಾತ ಜನಸಾಮಾನ್ಯರ ಹೃದಯದಲ್ಲಿ ಬಿತ್ತಲು, ಪ್ರವಚನ ಮಾಧ್ಯಮವನ್ನು ಆಯ್ದುಕೊಂಡು ಜನಪ್ರಿಯಗೊಳಿಸಿದ್ದಾರೆ…

 ವೇದ ಗ್ರಂಥಗಳು, ಮಧ್ವ-ಶಾಸ್ತ್ರ, ತರ್ಕ-ಶಾಸ್ತ್ರಗಳ ಮೇಲೆ ಅನೇಕಾನೇಕ ಅಪೂರ್ವ ಸಂಸ್ಕೃತ ವ್ಯಾಖ್ಯಾನಗಳನ್ನು ರಚಿಸಿ, ಪ್ರಕಟಿಸಿದ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ.

 ತಿಥಿನಿರ್ಣಯ” ಮತ್ತು “ನ್ಯಾಸ ಪದ್ಧತಿ” ಈ ತನಕ ಯಾವ ವಿದ್ವಾಂಸರಿಗೂ ತಿಳಿಯದ ಶ್ರೀ ಮಧ್ವಾಚಾರ್ಯರ ಎರಡು ಅಪೂರ್ವ ಕೃತಿಗಳನ್ನು ಶೋಧಿಸಿ ಪತ್ತೆ ಮಾಡಿದ್ದಾರೆ.

 ಕೆಲವು ಗಮನಾರ್ಹ ಸಂಸ್ಕೃತ ಕೃತಿಗಳನ್ನು ಕನ್ನಡೀಕರಿಸಿದ್ದಾರೆ.

 ನೂರಾರು ಕನ್ನಡ ಕವನಗಳನ್ನು ರಚಿಸಿದ್ದಾರೆ.

 ಐವತ್ತಕ್ಕೂ ಹೆಚ್ಚು ಆಧ್ಯಾತ್ಮಿಕ ಪುಸ್ತಕಗಳನ್ನು ಕನ್ನಡದಲ್ಲಿ ಬರೆದು ಕೊಟ್ಟಿದ್ದಾರೆ.

 ಪ್ರಸ್ತುತ ವ್ಯವಹಾರ ಮತ್ತು ಸಾಹಿತ್ಯಗಳ ಕುರಿತು ಸಾವಿರಾರು ಲೇಖನಗಳನ್ನು ದಿನಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ, ಪ್ರಕಟಿಸುತ್ತಿದ್ದಾರೆ ಕೂಡ.

 ರಾಮಾಯಣ, ಮಹಾಭಾರತ, ಉಪನಿಷತ್ತುಗಳ, ಪುರಾಣಗಳ ಕುರಿತಾದ ಹಾಗು ಇನ್ನಿತರ ಆಧ್ಯಾತ್ಮಿಕ ವಿಚಾರಧಾರೆಗಳ ಬಗೆಗೆ, ಸುದೀರ್ಘ ಕಾಲದಿಂದ (ಸುಮಾರು ೩೦-೪೦ ವರ್ಷಗಳಿಂದ) ನಿರಂತರ ನಡೆಸಿಕೊಂಡು ಬರುತ್ತಿರುವ ಪ್ರವಚನಗಳ ಉಪಲಬ್ಧವಿರುವ ಆಡಿಯೋ ರೆಕಾರ್ಡಿಂಗ್ ಗಳೇ ಸುಮಾರು “೨೫,೦೦೦ ಘಂಟೆಗಳಿಗೂ” ಅಧಿಕ ಇವೆ.

 ೧೯೭೯ ರಲ್ಲಿ ಅಮೇರಿಕದ ಪ್ರಿನ್ಸ್ಟನ್ ನಲ್ಲಿ ನಡೆದ “ವರ್ಲ್ಡ್ ಕಾನ್ಫರೆನ್ಸ್ ಆನ್ ರಿಲಿಜನ್ & ಪೀಸ್ ” ನಲ್ಲಿ ಭಾಗವಹಿಸಿದ್ದರು.

 ಇವರು ಅಮೇರಿಕೆಯ ಬೇರೆ ಬೇರೆ ಭಾಗಗಳಲ್ಲಿ ಅಲ್ಲದೆ, ಅಬುದಾಬಿ, ಬಹರೈನ್ ಮತ್ತು ಯುನೈಟೆಡ್ ಅರಬ್ ಎಮರೈಟ್ಸ್ ನ ಬೇರೆ ಬೇರೆ ಪ್ರಾಂತ್ಯಗಳಲ್ಲೂ  ಉಪನ್ಯಾಸ ನೀಡಿದ್ದಾರೆ.

 

ಸಂಸ್ಕೃತ ಭಾಷೆಯ ಪ್ರಚಾರ ಮತ್ತು ಸಂಸ್ಕೃತವನ್ನು ಜನಪ್ರಿಯತೆಗೊಳಿಸಿದ ಬಗೆ :

 ಸಂಸ್ಕೃತ ಭಾಷೆಯಲ್ಲಿರುವ ಸೊಗಡನ್ನು , ಸೊಬಗನ್ನು ಎತ್ತಿತೋರಿಸಲು ಆಚಾರ್ಯರು ವ್ಯಾಪಕವಾಗಿ ದೊಡ್ಡ ಮಟ್ಟದಲ್ಲೇ ಪ್ರಮುಖ ಸಂಸ್ಕೃತ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸವ ಕಾರ್ಯಕ್ಕೆ ಕೈ ಹಾಕಿದರು, ಪರಿಣಾಮ ಈ ಕೆಳಗಿನ ಕನ್ನಡೀಕರಣಗೊಂಡ ಸಂಸ್ಕೃತ ಕೃತಿಗಳು ಹೊರಬಂದವು .

 ಬಾಣಭಟ್ಟನ  – “ಕಾದಂಬರಿ”

ಕಾಳಿದಾಸನ  – “ಶಾಕುಂತಲಾ”

ಶೂದ್ರಕನ      – “ಮೃಚ್ಛಕಟಿಕಾ”

ಭವಭೂತಿಯ  – “ಉತ್ತರರಾಮಚರಿತೆ”

ಮಹಾಶ್ವೇತೆ  – ಸಂಸ್ಕೃತದ ಕಥೆಗಳು ಕನ್ನಡದ ಕನ್ನಡಿಯಲ್ಲಿ

ಹಲವಾರು ಸಂಸ್ಕೃತ ಕವನಗಳು ಕನ್ನಡಕ್ಕಿಳಿದವು

 

 ಕೆಲವು ಸಂಸ್ಕೃತ ಕೃತಿಗಳಿಗೆ ಸಂಕ್ಷಿಪ್ತ ವ್ಯಾಖ್ಯಾನಗಳು :

 ಶ್ರೀ ವಾಮನ ಪಂಡಿತರ – “ಆನಂದಮಾಲಾ”

ಶ್ರೀ ತ್ರಿವಿಕ್ರಮ ಪಂಡಿತರ – “ವಾಯು ಸ್ತುತಿ”

ಶ್ರೀ ತ್ರಿವಿಕ್ರಮ ಪಂಡಿತರ – “ವಿಷ್ಣು ಸ್ತುತಿ”

 ಸಂಸ್ಕೃತದ ಬೇರೆ ಬೇರೆ ಸ್ತೋತ್ರಗಳು – “ಚತುರ್ದಶ ಸ್ತೋತ್ರಾಣಿ”

ರಾಘವೇಂದ್ರ ಸ್ತೋತ್ರ

ಜಯತೀರ್ಥ ಸ್ತುತಿ

 ವಿಷ್ಣುದಾಸಾಚಾರ್ಯರ – “ವಾದ ರತ್ನಾವಳಿ” (ಸಂಸ್ಕೃತದ ಒಂದು ತಾತ್ವಿಕ ಚರ್ಚೆಯ ಕೃತಿ)

ಚತ್ವಾರಿ ಸೂಕ್ತಾನಿ

ಚತುರ್ದಶ ಸೂಕ್ತಾನಿ

ಪ್ರಾಣಾಗ್ನಿಸೂಕ್ತ ಭಾಷ್ಯಂ

 

ಸಂಸ್ಕೃತದ ವಿಸ್ತೃತ ವ್ಯಾಖ್ಯಾನಗಳು ಈ ಕೆಳಗಿನ ಕೃತಿಗಳಿಗೆ :

 ಶ್ರೀ ಮಧ್ವಾಚಾರ್ಯರ ಕೃತಿ ಮಹಾಭಾರತತಾತ್ಪರ್ಯಂ (ಯಮಕ ಭಾರತ) – ಟೀಕೆ

ಶ್ರೀ  ಮಧ್ವಾಚಾರ್ಯರ ಕೃತಿ ಮಹಾಭಾರತತಾತ್ಪರ್ಯನಿರ್ಣಯ – ಟೀಕೆ

ಶ್ರೀ ನಾರಾಯಣ ಪಂಡಿತರ ಕೃತಿ ಶ್ರೀ ಮಧ್ವವಿಜಯ – ಟೀಕೆ

ಶ್ರೀ ಮಧ್ವಾಚಾರ್ಯರ ಕೃತಿ ಭಾಗವತ ತಾತ್ಪರ್ಯಕ್ಕೆ “ಟಿಪ್ಪಣಿ”

 ಉಪನಿಷಚ್ಚಂದ್ರಿಕಾ” – ಆರು ಉಪನಿಷತ್ತುಗಳಿಗೆ ವ್ಯಾಖ್ಯಾನ ಶ್ರೀ ವಾಮನ ಪಂಡಿತರ ವ್ಯಾಖ್ಯಾನ ಸಹಿತ

ನಾಮಚಂದ್ರಿಕಾ” – ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಕ್ಕೆ ವ್ಯಾಖ್ಯಾನ

ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ “ತತ್ವ ಪ್ರದೀಪ”ಕ್ಕೆ ವ್ಯಾಖ್ಯಾನ

ಶತರುದ್ರೀಯಕ್ಕೆ ಸ್ವಂತ ವ್ಯಾಖ್ಯಾನ

 

 ಗೌರವಗಳು ಮತ್ತು ಪ್ರಶಸ್ತಿಗಳು  :

 ಭಾರತ ಸರಕಾರದ “ಪದ್ಮಶ್ರೀ” ಪ್ರಶಸ್ತಿ

ಶ್ರೀ ದ್ವಾರಕಾನಾಥ ಸ್ವಾಮೀಜಿ, ಪರ್ತಗಳಿ ಗೋಕರ್ಣ ಮಠ, ಗೋವ ಅವರಿಂದ “ಪಂಡಿತ ರತ್ನ” ಪ್ರಶಸ್ತಿ

ಶ್ರೀ ವಿಬುಧೇಶತೀರ್ಥ ಸ್ವಾಮೀಜಿ, ಅದಮಾರು ಮಠ, ಉಡುಪಿ ಅವರಿಂದ “ವಿದ್ಯಾವಾಚಸ್ಪತಿ” ಬಿರುದು

ಶ್ರೀ ವಿದ್ಯಾಮಾನ್ಯ ತೀರ್ಥ ಸ್ವಾಮೀಜಿ, ಪಲಿಮಾರು ಮಠ, ಉಡುಪಿ ಅವರಿಂದ “ವಿದ್ಯಾರತ್ನಾಕರ” ಬಿರುದು

ಶ್ರೀ ಅದಮಾರು ಮಠ ಮತ್ತು ಶ್ರೀ ಪಲಿಮಾರು ಮಠಗಳ ವತಿಯಿಂದ ಸಂದ “ಸಂಶೋಧನಾ ವಿಚಕ್ಷಣ” ಪ್ರಶಸ್ತಿ

ಪಲಿಮಾರು ಮಠದ ಸ್ವಾಮಿಗಳಿಂದ “ಪಂಡಿತ ರತ್ನ” ಪ್ರಶಸ್ತಿ

 ಸಾಮಾನ್ಯ ಶಿಕ್ಷಣ ಅಕಾಡೆಮಿ, ಮಣಿಪಾಲ ವತಿಯಿಂದ, ಭಾರತೀಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಕ್ಕೆ ಸಲ್ಲಿಸಿದ ಶ್ಲಾಘನೀಯ ಸೇವೆಗಾಗಿ “ಫೆಲೋಶಿಪ್” ಪ್ರಶಸ್ತಿ ಪ್ರದಾನ

 ಕರ್ನಾಟಕ ರಾಜ್ಯ ಸರಕಾರದ ವತಿಯಿಂದ, ವೇದ ಸಾಹಿತ್ಯ ಮತ್ತು ಆಧ್ಯಾತ್ಮಿಕ ಕ್ಷೇತ್ರಕ್ಕೆ ಸಲ್ಲಿಸಿದ ಶ್ಲಾಘನೀಯ ಸೇವೆಗಾಗಿ “ರಾಜ್ಯ ಪ್ರಶಸ್ತಿ” ಪ್ರದಾನ

 ಮಂಗಳೂರು ವಿಶ್ವವಿದ್ಯಾಲಯ ಗೌರವ “ಡಾಕ್ಟರೇಟ್”

 

ಸಮ್ಮೇಳನಗಳು / ಕಾವ್ಯಾತ್ಮಕ ವಿಚಾರ ಗೋಷ್ಠಿಗಳು / ಭಾಗವಹಿಸಿದ ಚರ್ಚೆಗಳು :

 ೧೯೮೦ ರಲ್ಲಿ ದೆಹಲಿಯಲ್ಲಿ ನಡೆದ ” ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ” ಭಾಗವಹಿಸಿದ್ದರು.

ದಕ್ಷಿಣ ಕನ್ನಡದ “ಸಂಸ್ಕೃತ ಪರಿಷತ್” ನ ಅಧ್ಯಕ್ಷರಾಗಿದ್ದರು.

೧೯೯೫ ರಲ್ಲಿ ಮದರಾಸಿನಲ್ಲಿ (ಚೆನ್ನೈ) ನಡೆದ “ಅಖಿಲ ಭಾರತ ಮಧ್ವ ಸಮ್ಮೇಳನ” ದ ಅಧ್ಯಕ್ಷರಾಗಿದ್ದರು.

೨೦೦೧ ರಲ್ಲಿ ಉಡುಪಿಯಲ್ಲಿ ನಡೆದ “ಸಾಹಿತ್ಯ ಸಮ್ಮೇಳನ” ದ ಅಧ್ಯಕ್ಷರಾಗಿದ್ದರು.

 

ಶ್ರೀ ಬನ್ನಂಜೆ ಗೋವಿಂದಾಚಾರ್ಯರು ನೀಡಿದ ಸಮಗ್ರ ಗ್ರಂಥ ಕೊಡುಗೆಗಳು :
ಸಂಸ್ಕೃತ ಕೃತಿಗಳು :

೧. ಸರ್ವಮೂಲಗ್ರಂಥ

೨. ಶ್ರೀ ಮಧ್ವವಿಜಯ

೩. ಉಪನಿಷಚ್ಚಂದ್ರಿಕಾ

೪. ಮಹಾಭಾರತತಾತ್ಪರ್ಯಂ (ಯಮಕಭಾರತಮ್)

೫. ಮಹಾಭಾರತತಾತ್ಪರ್ಯನಿರ್ಣಯಃ

೬. ತತ್ವವಾದಸ್ಯ ಪ್ರಮೇಯನವಮಾಲಿಕಾ

೭. ಆನಂದಮಾಲ

೮. ವಿಷ್ಣುಸಹಸ್ರನಾಮಾನಿ (ವಿದ್ಯಾಧಿರಾಜ ವ್ಯಾಖ್ಯಾನ ಸಹಿತ)

೯. ಪ್ರಾಣಾಗ್ನಿಸೂತ್ರಭಾಷ್ಯಂ (ಫಲಿಮಾರು ಮಠ)

೧೦. ವಾಯುಸ್ತುತಿಃ (ವೇದಾತ್ಮತೀರ್ಥ ವ್ಯಾಖ್ಯಾನ ಸಹಿತ)

೧೧. ಅಸ್ಯವಾಮೀಯ ಸೂಕ್ತಮ್

೧೨. ಪ್ರಾಣಾಗ್ನಿಸೂಕ್ತಮ್

೧೩. ವಾದರತ್ನಾವಳಿ (ವಿಷ್ಣುದಾಸಾಚಾರ್ಯ)

೧೪. ಮಹಾಶ್ವೇತಾ (ಸಂಸ್ಕೃತಕಥಾ)

೧೫. ಸಂಗ್ರಹರಾಮಾಯಣಮ್

೧೬. ಶತರುದ್ರೀಯಮ್

೧೭. ಸೂಕ್ತಮಾಲಾ

೧೮. ಮನ್ಯುಸೂಕ್ತಮ್ – ಅಂಭೃಣೀಸೂಕ್ತಮ್

೧೯. ನರಸಿಂಹಸ್ತುತಿಃ (ಬಾಳಗಾರು)

೨೦. ಶಾಕುಂತಲಾ ಸಮೀಕ್ಷಾ

೨೧. ಪ್ರಮೇಯನವಮಾಲಿಕಾ

೨೨. ಶ್ರೀ ವಿಷ್ಣು ಸಹಸ್ರನಾಮಸ್ತೋತ್ರಮ್ – ನಾಮಚಂದ್ರಿಕಾ

ಮಹಾಭಾರತತಾತ್ಪರ್ಯನಿರ್ಣಯ ಪರಿಶಿಷ್ಟಾಃ  

೨೩. ಏಕಾಕ್ಷರ ನಾಮಮಾಲಾ

೨೪. ಮಾತ್ರಾಛಂದೋಮೀಮಾಂಸಾ

೨೫. ಶಬ್ದಾಲಂಕಾರಮೀಮಾಂಸಾ

೨೬. ಶ್ಲೇಶಮೀಮಾಂಸಾ

ಉಪನಿಷಚ್ಚಂದ್ರಿಕಾ ಪರಿಶಿಷ್ಟಾಃ

೨೭. ವಾದಿಕಛಂದೋಮೀಮಾಂಸಾ

೨೮. ತಾರತಮ್ಯಮೀಮಾಂಸಾ

ಶ್ರೀಮಧ್ವವಿಜಯ ಪರಿಶಿಷ್ಟಾಃ

೨೯. ಛಂದೋಮೀಮಾಂಸಾ

೩೦. ಬಂಧಮೀಮಾಂಸಾ

೩೧. ಕಾವ್ಯಮೀಮಾಂಸಾ

೩೨. ಅಲಂಕಾರಮೀಮಾಂಸಾ

೩೩. ಶಾಸನಮೀಮಾಂಸಾ

೩೪. ನಾಮಮೀಮಾಂಸಾ

೩೫. ಪ್ರತನಪ್ರಯೋಗಮೀಮಾಂಸಾ

೩೬. ಅವತಾರಮೀಮಾಂಸಾ

೩೭.  ನಾಮಮೀಮಾಂಸಾ

೩೮. ಭಾರತೀಯ ಮನಶ್ಶಾಸ್ತ್ರಸ್ಯ ಮೂಲತತ್ವಾನಿ

೩೯. ತತ್ವಪ್ರದೀಪಃ

೪೦. ಖಂಡಾರ್ಥನಿರ್ಣಯಃ

೪೧. ಮಹಾನಾರಾಯಣೋಪನಿಷಾತ್

೪೨. ಮಹಾನಾಮ್ನೀ – ೩ ಮಂತ್ರಾಃ

೪೩. ಘರ್ಮಸೂಕ್ತಂ

೪೪. ಪುರುಷಸೂಕ್ತಮ್

೪೫. ಅನುನಾರಾಯಣೋಪನಿಷತ್ – ಭಾಷ್ಯಮ್

೪೬. ಶ್ರೀಸೂಕ್ತಭಾಷ್ಯಮ್

೪೭. ಮಂತ್ರಿಕೋಪನಿಷತ್ ಭಾಷ್ಯಮ್

೪೮. ಬೃಹತೀಸಹಸ್ರಾಮಸಮನ್ವಯಮ್

 

ಕನ್ನಡದ ಕೃತಿಗಳು  :

೪೯. ಭಗವಂತನ ನಲ್ನುಡಿ

೫೦. ವಿಷ್ಣುಸಹಸ್ರನಾಮ (ಕನ್ನಡ)

೫೧. ಮಹಾಭಾರತ ತಾತ್ಪರ್ಯನಿರ್ಣಯ (ಕನ್ನಡ ಮೂಲ)

೫೨. ಶ್ರೀಮಧ್ವವಿಜಯ (ಕನ್ನಡ ಮೂಲ)

೫೩. ಶ್ರೀಮಧ್ವವಿಜಯ (ಕನ್ನಡ ಅನುವಾದ)

೫೪. ಸಂಗ್ರಹ ಭಾಗವತ

೫೫. ಸಂಗ್ರಹ ರಾಮಾಯಣ

೫೬. ಮಧ್ವರಾಮಾಯಣ

೫೭. ವಾಲ್ಮೀಕಿ ಕಂಡ ರಾಮಾಯಣ

೫೮. ಭೀಮಸೇನ ವ್ಯಾಸರು ಕಂಡಂತೆ

೫೯. ಅರ್ಜುನ

೬೦. ಪಂಚಸೂಕ್ತಗಳು

೬೧. ಪುರುಷಸೂಕ್ತ – ಶ್ರೀಸೂಕ್ತ

೬೨. ವಿಷ್ಣುಸ್ತುತಿ

೬೩. ನಖಸ್ತುತಿ – ವಾಯುಸ್ತುತಿ

೬೪. ಶಿವಸ್ತುತಿ – ನರಸಿಂಹಸ್ತುತಿ

೬೫. ಕೃಷ್ಣನೆಂಬ ಸೊದೆಯ ಕಡಲು

೬೬. ತಂತ್ರಸಾರ ಸಂಗ್ರಹ

೬೭. ನಾಕು ಹಾಡುಗಳು

೬೮. ಹದಿನಾಕು ಹಾಡುಗಳು

೬೯. ಆನಂದತೀರ್ಥರ ಭಕ್ತಿಗೀತೆಗಳು

೭೦. ಕೃಷ್ಣಮಾಲಾ – ಧ್ಯಾನಮಾಲ

೭೧. ಮಂಗಲಾಷ್ಟಕ

೭೨. ಅಂಕೆಯಲ್ಲಿ ಅಧ್ಯಾತ್ಮ

೭೩. ಆನಂದತೀರ್ಥ – ಒಂದು ರೂಪಕ

೭೪. ಆಚಾರ್ಯ ಮಧ್ವ (ಬದುಕು-ಬರಹ )

೭೫. ಆಚಾರ್ಯ ಮಧ್ವ ಜೀವನ ಸಂದೇಶ (ಆದರ್ಶ ಗುರುಕುಲ)

೭೬. ಆಚಾರ್ಯ ಮಧ್ವ ಜೀವನ ಸಂದೇಶ (ಪೇಜಾವರ ಮಠ)

೭೭. ತಲವಕಾರೋಪನಿಷತ್ತು

೭೮. ಯಾಜ್ಞೀಯಮಂತ್ರೋಪನಿಷತ್ತು

೭೯. ಪರಾಶರ ಕಂಡ ಪರತತ್ವ

೮೦. ಕನಕೋಪನಿಷತ್ತು

೮೧. ಪುರಂದರೋಪನಿಷತ್ತು

೮೨. ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ

೮೩. ಮುಗಿಲ ಮಾತು

೮೪. ಆವೆಯ ಮಣ್ಣಿನ ಆಟದ ಬಂಡಿ

೮೫. ಕಾದಂಬರಿ

೮೬. ಮತ್ತೆ ರಾಮನ ಕಥೆ

೮೭. ಶಾಕುಂತಲಾ – ಮತ್ತೆ ನೆನಪಾದಳು ಶಕುಂತಲೆ

೮೮. ಸಂಗ್ರಹ ನಿತ್ಯಾನುಷ್ಠಾನ  (ಮುಂಜಾನೆಯಿಂದ ಸಂಜೆಯ ತನಕ)

೮೯. ಸಂಗ್ರಹ ನಿತ್ಯಾನುಷ್ಠಾನ  (ಪೇಜಾವರ ಮಠ)

೯೦. ಕೃಷ್ಣನ ಉಡುಪಿ

೯೧. ಉಡುಪಿ ಕೃಷ್ಣ ದಾಸರು ಕಂಡಂತೆ

೯೨. ಸಂಪ್ರದಾಯ ಪದ್ಧತಿ

೯೩. ಅಣುಮಧ್ವ ಚರಿತ

೯೪. ಕಂಕಣಾಕಾರ ಸುಳಾದಿ

೯೫. ಅರವತ್ತು

೯೬. ಬನ್ನಂಜೆ ಬರಹಗಳು – ೧

೯೭. ಬನ್ನಂಜೆ ಬರಹಗಳು – ೨

೯೮. ಬನ್ನಂಜೆ ಬರಹಗಳು – ೩

೯೯. ನಾಕು ತಂತಿ (MGM ಕಾಲೇಜು ಮತ್ತು K.S.I. )

೧೦೦. ಬೇಂದ್ರೆ ಪುಸ್ತಕದ ಲೇಖನ (MGM ಕಾಲೇಜು)

೧೦೧. ವಾರ್ಷಿಕ ವಿಶೇಷಗಳು

೧೦೨. ಜಯತೀರ್ಥಸ್ತುತಿ

೧೦೩. ದಾಸಸಂತಸಾಹಿತ್ಯ ಸಮ್ಮೇಳನಾಧ್ಯಕ್ಷ ಭಾಷಣ (ಪಂಡರಾಪುರ)

೧೦೪. ಅಖಿಲ ಭಾರತ ಮಾಧ್ವಸಮ್ಮೇಳನಾಧ್ಯಕ್ಷ ಭಾಷಣ (ಚೆನ್ನೈ)

೧೦೫. ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಭಾಷಣ (ಉಡುಪಿ)

೧೦೬. ಚತುರ್ದಶಸ್ತೋತ್ರ

೧೦೭. ಚತುರ್ವಿಂಶತಿ ಮೂರ್ತಿಗಳು

೧೦೮. ವಾಜ್ಞ್ಮಯದ ಬೀಜಾಕ್ಷರ ಓಂಕಾರ

೧೦೯. ಗಾಯತ್ರೀಮಂತ್ರಾರ್ಥ

೧೧೦. ಅಂಗನ್ಯಾಸ

೧೧೧. ಶೋಡಷಸಂಸ್ಕಾರಗಳು

೧೧೨. ಪ್ರಾಣಸೂತ್ರಗಳು

೧೧೩. ಪ್ರಾಣಸೂಕ್ತ ಕನ್ನಡಾನುವಾದ

೧೧೪. ವೇದಗಳ ಸೂಕ್ತ ಕನ್ನಡಾನುವಾದ

೧೧೫. ಮಂತ್ರಗಳ ಛಂದಸ್ಸು

೧೧೬. ಆಸನಗಳು

೧೧೭. ಮುದ್ರೆಗಳು

೧೧೮. ಚಕ್ರಾಬ್ಜಮಂಡಲ ಭದ್ರಕಮಂಡಲ

೧೧೯. ಅಂಕುರಾರ್ಪಣ

೧೨೦. ನಾಡೀಚಕ್ರ

೧೨೧. ತಲವಕಾರೋಪನಿಷತ್ – ಪದ್ಯಾನುವಾದ (ತಳವಕಾರರು ಕಂಡ ಗುಟ್ಟು)

೧೨೨. ಸ್ವಗತಗಳು

೧೨೩. ಕತ್ತಲೆಯಿಂದ ಬೆಳಕಿನೆಡೆಗೆ

೧೨೪. ಬೆಳಕಾಗಿ ಬನ್ನಿ

೧೨೫. ಪದ್ಯ ಸಂಗ್ರಹ

೧೨೬. ಉಡುಪಿಯ ಕಂಡೀರಾ

೧೨೭. ಮುಕ್ಕಣ್ಣ ದರ್ಶನ

೧೨೮. ಹೇಳದೇ ಉಳಿದದ್ದು

೧೨೯. ಐದುಕಾಲಿನ ಮಂಚ

೧೩೦. ಓ ಪಾಜಕದ ಗಿಳಿಯೆ

೧೩೧. ದಾಸಾಂಜಲಿ

೧೩೨. ಕಾವ್ಯಾಂಜಲಿ

೧೩೩. ಗ್ರಂಥಾಂಜಲಿ

೧೩೪. ಪ್ರಮೇಯನವಮಾಲಿಕಾ (ಅಣುಮಧ್ವವಿಜಯ)

೧೩೫. ಯುಗಾದಿ-ವರ್ಷಾದಿ

೧೩೬. ಕಡಿಯಾಳಿಯ ಮಹಿಷಮರ್ದಿನಿ (ಲೇಖನ)

೧೩೭. ಋತುಸಂಹಾರ (ತುಷಾರಾ)

೧೩೮. ಕಿಷ್ಕಿಂದಾಕಾಂಡ (ಉದಯವಾಣಿ)

೧೩೯. ಗೀತಾಸಂದೇಶ (ಸುಗುಣಮಾಲಾ)

೧೪೦. ವೇದಗಳ ಸಂದೇಶ (ಸುಗುಣಮಾಲಾ)

೧೪೧. ಬೋಧಿವೃಕ್ಷ (ವಿಜಯ ಕರ್ನಾಟಕ)

೧೪೨. ಅಕ್ಷರದ ಮುನ್ನುಡಿ

೧೪೩. ಮೈತ್ರದಲ್ಲಿನ ೬ ಲೇಖನಗಳು

೧೪೪. ಪುರಾಣ ಪ್ರಪಂಚದ ಮುನ್ನುಡಿ

೧೪೫. ಪದಾರ್ಥ ಚಿಂತಾಮಣಿಯ ಮುನ್ನುಡಿ

೧೪೬. ಮಂತ್ರರಾಮಾಯಣದ ಲೇಖನ – ಸಣ್ಣ ಪಾತ್ರಗಳ ದೊಡ್ಡ ಕೊಡುಗೆ

೧೪೭. ಘಟಿಕೋತ್ಸವದ ಅಧ್ಯಕ್ಷಭಾಷಣದ ಲೇಖನ

೧೪೮. ಮಹಾಭಾರತ ತಾತ್ಪರ್ಯನಿರ್ಣಯ (೨ ಉಪನ್ಯಾಸಗಳು)

೧೪೯. ಮಧ್ವನವಮೀ ನಿಮಿತ್ತ ವಿಶೇಷ ಲೇಖನ

೧೫೦. ಒಂದು ಎರಡಲ್ಲ ಎರಡು ಒಂದಲ್ಲ (ಸಣ್ಣ ಲೇಖನ)

೧೫೧. ಮಧ್ವಾಚಾರ್ಯರು (ಭಾರತ ಭಾರತಿ ಪುಸ್ತಕದ ಸಂಪದ)

೧೫೨. ನಿತ್ಯಜೀವನಕ್ಕೆ ಭಗವದ್ಗೀತೆ (ತರಂಗದ ಲೇಖನ)

೧೫೩. ಪೇಜಾವರ ಮಠದ ಪರಂಪರೆ (ಉದಯವಾಣಿ ಲೇಖನ) ಪರ್ಯಾಯದ ಕುರಿತಾದ ಲೇಖನಗಳು

 

ಡಾ. ಬನ್ನಂಜೆ ಗೋವಿಂದಾಚಾರ್ಯರ ಕುರಿತು